ಹಿಂದುಸ್ತಾನಿ ಸಂಗೀತ ವಿದ್ವಾಂಸ ಉಸ್ತಾದ್ ಬಡೇ ಗುಲಾಂ ಅಲಿಖಾನ್ ಸಂಗೀತ ಪರಂಪರೆಯ ಮನೆತನದಲ್ಲಿ ೧೯೦೨ರಲ್ಲಿ ಜನಿಸಿದರು.ಇವರು ಜನಿಸಿದ ಸ್ಥಳ ಪೂರ್ವ ಪಂಜಾಬ್ ಅಂದರೆ ಈಗಿನ ಪಾಕಿಸ್ತಾನ.ಅಲಿಖಾನ್ ಹಿಂದೂಸ್ತಾನಿ ಸಂಗೀತವನ್ನು ಪಟಿಯಾಲ ಘರಾಣ ಶೈಲಿಯಲ್ಲಿ ಹಾಡುತ್ತಿದ್ದರು.ತಮ್ಮ ಜೀವಿತದ ಬಹುಭಾಗವನ್ನು ಲಾಹೋರ್,ಮುಂಬೈ,ಹೈದರಾಬಾದ್ ಹಾಗೂ ಕೊಲ್ಕತಾದಲ್ಲಿ ಕಳೆದರು.ಭಾರತ ವಿಭಜನೆಯಾದಾಗ,೧೯೪೭ರಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದರು.೧೯೫೭ರಲ್ಲಿ ಭಾರತದ ಪೌರತ್ವವನ್ನು ಪಡೆದು,ಭಾರತಕ್ಕೆ ಹಿಂದಿರುಗಿದರು.ನೌಷಾದ್ ಸಂಗೀತ ನಿರ್ದೇಶನದ "ಗುಲಾಮ್ ಇ ಅಝಮ್" ಚಿತ್ರದ ತಾನ್‌ಸೇನ್ ಪಾತ್ರಕ್ಕೆ ಕಂಠದಾನ ಮಾಡಿದ್ದಾರೆ.ಜನರು ಇವರನ್ನು ೨೦ನೇ ಶತಮಾನದ ತಾನ್‌ಸೇನ್ ಎಂದೇ ಗೌರವಿಸುತ್ತಿದ್ದರು. ಅಲಿಖಾನ್ ೧೯೬೮ರ ಏಪ್ರಿಲ್ ೨೫ರಂದು ಹೈದರಾಬಾದ್‌ನಲ್ಲಿ ನಿಧನರಾದರು.